ಗೋವು ದತ್ತು ಯೋಜನೆ

ಪುರಾತನ ಕಾಲದಿಂದಲೂ ನಮ್ಮ ಹಿರಿಯರು, ಪೂರ್ವಜರು ತಮ್ಮ ಮನೆಯಲ್ಲಿದ್ದ ಗೋವಿಗೆ ಗೋಗ್ರಾಸ ನೀಡಿಯೇ ತಮ್ಮ ದಿನಚರಿಯನ್ನು ಆರಂಭಿಸುತ್ತಿದ್ದರು. ಗೋವಿಗೆ ಗೋಗ್ರಾಸ ನೀಡುವುದರಿಂದ ನಮ್ಮ ಪೂರ್ವಜನ್ಮದ ಪಾಪಗಳು ಪರಿಹಾರಗೊಳ್ಳುತ್ತದೆ ಎಂಬುದು ನಮ್ಮ ನಂಬಿಕೆ ಮಾತ್ರವಲ್ಲ ಗೋವಿನ ಹಾಲನ್ನು ಬಳಸುವ ನಮ್ಮೆಲ್ಲರ ಕರ್ತವ್ಯ ಕೂಡ. ಆದರೆ ಇಂದಿನ ಜೀವನ ಶೈಲಿಯಲ್ಲಿ ಗೋವನ್ನು ಸಾಕಲು ಸಾಧ್ಯವಿಲ್ಲದ ಗೋಪ್ರೇಮಿಗಳು, ನಮ್ಮ ಗೋಶಾಲೆಯ ಗೋವನ್ನು ದತ್ತು ತೆಗೆದುಕೊಂಡು ಅದರ ಖರ್ಚು ಭರಿಸಬಹುದು. ಇದೊಂದು ಅತ್ಯಂತ ಪುಣ್ಯಪ್ರದವಾದ ಕಾರ್ಯ. ತಾವೆಲ್ಲರೂ ಇದರಲ್ಲಿ  ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇವೆ.

ನಮ್ಮ ಗೋದತ್ತು ಯೋಜನೆಗಳು ಹೀಗಿದೆ:

ಆ ಜನ್ಮ ಒಂದು ಗೋವಿನ ದತ್ತು ಮತ್ತು ಗೋಶಾಲೆಯ ಶಾಶ್ವತನಿಧಿ –  ರೂ. 1,00,000
ಒಂದು ಗೋವಿನ ವಾರ್ಷಿಕ ದತ್ತು –  ರೂ. 10,000
ಒಂದು ಗೋವಿನ ಮಾಸಿಕ ದತ್ತು –  ರೂ. 1,000
ಮಾತ್ರವಲ್ಲದೇ ತಮ್ಮ ಮನೆಯಲ್ಲಿ ನಡೆಯುವ ಶುಭಕಾರ್ಯ, ಗ್ರಹಪ್ರವೇಶ, ವಾರ್ಷಿಕೋತ್ಸವದ ನಿಮಿತ್ತ ಯಾವುದೇ ಮೊತ್ತವನ್ನು ಗೋಗ್ರಾಸಕ್ಕಾಗಿ ನೀಡಬಹುದು.

Comments are closed