ನ.1 ರಂದು ಗೋಪ್ರೇಮಿ ವೇದಿಕೆ ಶುಭಾರಂಭ

ಮಂಗಳೂರು: ಗೋ ಕಳ್ಳತನದ ಬಗ್ಗೆ ಸಾತ್ವಿಕ ಆಕ್ರೋಶ, ಮಕ್ಕಳಿಗೆ ಗೊತ್ತಿಲ್ಲದ ಗೋವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗೋವಿನ ಬಗೆಗೆ ಗೌರವ ಹಾಗೂ ಅನುಕಂಪ ಇರುವ ಸಹೃದಯರನ್ನೆಲ್ಲಾ ಒಟ್ಟಿಗೆ ಸೇರಿಸುವ ಸಾತ್ವಿಕ ಯತ್ನ ಗೋ ಪ್ರೇಮಿ ವೇದಿಕೆಯಾಗಿದ್ದು, ಇದರ ಶುಭಾರಂಭ ನ.1 ರಂದು ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮಾತೆಯರಿಂದ ಲಲಿತಾ ಸಹಸ್ರನಾಮ ಪಠಣ ನೆರವೇರಲಿರುವುದು ಎಂದು ಗೋವನಿತಾಶ್ರಯ ಟ್ರಸ್ಟಿ ಡಾ.ಪಿ.ಅನಂತಕೃಷ್ಣ ಭಟ್ ಅವರು ಹೇಳಿದರು.

govantha

ಅವರು ಸೋಮವಾರ ನಗರದಲ್ಲಿ ಪತ್ರಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಗೋಪ್ರೇಮಿ ವೇದಿಕೆ ಗೋ ಸಂರಕ್ಷಣೆ ಹಾಗೂ ಘೋಷಣೆಗೆ ಇಂಬು ನೀಡುವ ಆಂದೋಲನವಾಗಿದೆ. 2001 ರಲ್ಲಿ ಗೋವನಿತಾಶ್ರಯ ಟ್ರಸ್ಟ್ ಸಂಸ್ಥೆಯು ಆರಂಭವಾಗಿದ್ದು, ಪ್ರಸ್ತುತ 300 ಕ್ಕಿಂತಲೂ ಅಧಿಕ ದನ- ಕರುಗಳನ್ನು ಹೊಂದಿದ ಜಿಲ್ಲೆಯ ದೊಡ್ಡ ಗೋ ಶಾಲೆ ಇದಾಗಿದೆ.
ಪ್ರತಿ ತಿಂಗಳು ಸುಮಾರು 4 ಲಕ್ಷ ರೂ. ಸಂಸ್ಥೆಯನ್ನು ನಡೆಸಲು ವೆಚ್ಚ ತಗಲುತ್ತಿದೆ. ಇದಕ್ಕಾಗಿ ಸಮಾಜದ ದಾನಿಗಳ ಸಹಕಾರ ಅತ್ಯಗತ್ಯ. ವಾರ್ಷಿಕವಾಗಿ ಕೇವಲ ರೂ. 100 ಗೋಗ್ರಾಸಕ್ಕೆಂದು ನೀಡಿ ಇದರ ಸದಸ್ಯತ್ವ ಹೊಂದಬಹುದು  ಅಥವಾ ಐಚ್ಚಿಕವಾಗಿ ಯಾವುದೇ ಹೆಚ್ಚಿನ ಮೊತ್ತ ಉದಾರವಾಗಿ ನೀಡಿ ಗೋ ಸೇವಾ ಚಟುವಟಿಕೆಗೆ ಪ್ರೋತ್ಸಾಹ ನೀಡಬಹುದು.

ರೂ.10,000 ನೀಡಿ ಗೋಶಾಲೆಯ ಒಂದು ದಿನದ ವೆಚ್ಚವನ್ನು ಅಥವಾ ದನವೊಂದರ ವಾರ್ಷಿಕ ವೆಚ್ಚ ಭರಿಸಲು ಮುಂದಾಗಬಹುದು.ಈ ದೇಣಿಗೆ ಗೋವನಿತಾಶ್ರಯದಲ್ಲಿ ಟ್ರಸ್ಟಿಗೆ ಸಂದಾಯಗೊಂಡು ಆದಾಯ ತೆರಿಗೆ ವಿನಾಯಿತಿಯನ್ನು ಹೊಂದಲು ಅವಕಾಶವಿದೆ ಹಾಗೂ ಈ ಸಂಬಂಧ ಕೊಡಿಯಾಲ್ ಬೈಲ್‌ನ ಶಾರದಾ ವಿದ್ಯಾಲಯದ ಸಮೀಪವಿರುವ ಗೋಮಂಡಲದಲ್ಲಿ ಕಾರ್ಯಾಲಯ ಆರಂಭಗೊಂಡಿದೆ ಎಂದು ಅವರು ಹೇಳಿದರು.

ಗೋವನಿತಾಶ್ರಯ ಟ್ರಸ್ಟ್‌ನ ವಿಕ್ರಮ್ ನಾಯಕ್,  ಗೋಪ್ರೇಮಿ ವೇದಿಕೆ  ಸಂಚಾಲಕರಾದ ರಾಮಕೃಷ್ಣ ಭಟ್, ಕೃಷ್ಣ ಮೂರ್ತಿ, ಸುಧೀರ್ ಆಚಾರ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Comments are closed.