2002ರಲ್ಲಿ “ವಿಶ್ವ ಹಿಂದು ಪರಿಷತ್”ನ ಪ್ರಕಲ್ಪವಾಗಿ ರೂಪುಗೊಂಡ ಈ ಸಂಸ್ಥೆ 10 ಎಕ್ರೆಯ ಸುಂದರ ವಿಶಾಲ ಪ್ರದೇಶದಲ್ಲಿ ಕಪಿಲ, ಆಮೃತ ಹಾಗೂ ಗಂಗಾ ಎಂಬ ಮೂರು ಗೋಶಾಲೆಗಳು ರಚಿಸಲ್ಪಟ್ಟಿವೆ. ಇದರಲ್ಲಿ 250ಕ್ಕೂ ಮಿಕ್ಕಿ ಗೋವುಗಳು ಆಶ್ರಯ ಹೊಂದಿವೆ. ತಮ್ಮ ನೆತ್ತಿಯ ನೇರಕ್ಕೆ ಬೀಸಿದ ಕಟುಕರ ಕತ್ತಿಯಿಂದ ಬದುಕಿ ಬಂದ ಬಡಪಾಯಿ ಮೂಕಪಶುಗಳಿವು. ಯಾರಿಗೂ ಉಪದ್ರವ ಮಾಡದೆ, ಹುಲ್ಲು, ಹಸಿರು ಮೇವು ತಿಂದು ನೀರು ಕುಡಿದು ಅಮೃತ ಸಮಾನ ಹಾಲು ನೀಡುವಂತಹುಗಳು ಗೋವುಗಳು. ಆದರೆ ತನ್ನ ದುರಾಸೆಗೆ ಇವುಗಳ ಪ್ರಾಣವನ್ನೇ ಹಿರುವ ಮಾನವನ ಕ್ರೌರ್ಯತೆಗೆ ಸೇವೆಯ ಸಾತ್ವಿಕತೆ ಒಡ್ದುವ ತೆರದಲ್ಲಿ ಈ “ಗೋವಾನಿತಾಶ್ರಮ ಟ್ರಸ್ಟ್” ತಲೆಯೆತ್ತಿ ನಿಂತಿದೆ.
ಅದೇ ರೀತಿ ಇಲ್ಲಿನ ‘ಮಮತ’ ಹೆಸರಿನ ಮಹಿಳಾ ಪುನರ್ವಸತಿ ಕೇಂದ್ರ ಅಶಕ್ತ ಮಹಿಳೆಯರ ಪಾಲಿಗೆ ಭಾಗ್ಯ ಸಂಜೀವಿನಿಯೆನಿಸಿದೆ. ಹತ್ತು ಎಕ್ರೆ ನಿವೇಶನದಲ್ಲಿ ತಲೆಯೆತ್ತಿರುವ ಈ ನಂದಗೋಕುಲದಲ್ಲಿ ಒಂದು ಸುಂದರ ಗೋಪಾಲಕೃಷ್ಣನ ಮಂದಿರವು ನಿರ್ಮಿತಗೊಂಡಿದೆ ಇದರ ಸುತ್ತಲ ಪರಿಸರದಲ್ಲಿ ಹಸಿರು ತೆಂಗಿನತೋಟ ಸಾವಯವ ಕೃಷಿಯು ಇದೆ. ಎರೆಹುಳುಗೊಬ್ಬರ, ಹಟ್ಟಿಗೊಬ್ಬರ, ಗೋಮೂತ್ರ ಸಂಬಂಧಿ ಔಷಧವನ್ನು ಸಂಸ್ಥೆ ಒದಗಿಸುತ್ತಿದೆ. ಕೇಂದ್ರ ಪ್ರಾಣಿ ಅಭಿವೃದ್ಧಿಗೆ ಸಂಯೋಜಿತವಾದ, ಆದಾಯ ತೆರಿಗೆ ವಿನಾಯಿತಿ ಹೊಂದಿದ, ವಿದೇಶದಿಂದಲೂ ದೇಣಿಗೆ ಪಡೆಯಲು ಅಧಿಕೃತ ಸಂಸ್ಥೆ “ಗೋವನಿತಾಶ್ರಯ ಟ್ರಸ್ಟ್ (ರಿ.)”