ಸಾಧನೆಗಳು

2002ರಿಂದ ನಮ್ಮ ಸಂಸ್ಥಯು ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಅನೇಕ ಗಣ್ಯರು ಮತ್ತು ಹಿತೈಷಿಗಳು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ರೋಟರಿ, ಕೇರಳದ ಆನಂದ ಆಶ್ರಮ ಹೀಗೆ ಹತ್ತು ಹಲವು ದೇಶ ವಿದೇಶದ ಸಂಘನೆಗಳು ನಮ್ಮೊಂದಿಗೆ ಕೈಜೋಡಿಸಿವೆ.

ನಮ್ಮ ಸಂಸ್ಥೆ ‘ಮಮತಾ’ ಟ್ರಸ್ಟ್ ವಸತಿ ಕೇಂದ್ರದಲ್ಲಿರುವ ಕೆಲವು ಯುವತಿಯರಿಗೆ ವಿವಾಹ ಮಾಡಿಕೊಟ್ಟು ಪುನರ್‌ಜೀವನ ನೀಡಿದೆ. ಅಕ್ರಮವಾಗಿ ಕಸಾಯಿಖಾನೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ್ದು ಮಾತ್ರವಲ್ಲದೆ, ಈ ಬಗ್ಗೆ ಜನಮಾನಸರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಮ್ಮ ಸಂಸ್ಥ ಮಾಡುತ್ತಿದೆ.

ಕಳೆದ 12 ವರ್ಷಗಳಿಂದ ಗೋಸಂರಕ್ಷಣೆ ಮತ್ತು ಸಂವರ್ಧನೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುದಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು 2011ರಲ್ಲಿ 2 ದಿನ ದೊಡ್ಡಮಟ್ಟದ ಗೋಸಮ್ಮೇಳನವನ್ನು ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು, ರೈತರು, ಗೋಪ್ರೇಮಿಗಳು ನಡೆದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ್ದರು.

2012 ಅಂದರೆ ನಮ್ಮ ಸಂಸ್ಥಯ ದಶಮಾಶಮಾನೋತ್ಸವದ ನಿಮಿತ್ತ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಗೋಮಂಡಲ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಮಿಕ್ಕಿ ಗೋಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ನಡೆಸಿದರು.

2013ರಲ್ಲಿ ಗ್ರಾಮೋತ್ಸವ ಮತ್ತು ಗೋಪೂಜೆ ಎಂಬ ಕಾರ್ಯಕ್ರಮವನ್ನು ನಡೆಸಿದ್ದು, ಗೋಶಾಲೆಯ ಸುತ್ತಲಿನ 6 ಗ್ರಾಮದ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು.

Comments are closed.