ಗೋವನಿತಾಶ್ರಯಕ್ಕೆ ಸ್ವಾಗತ
“ಗಾವೊ ವಿಶ್ವಸ್ಯ ಮಾತರಂ” ಅಂದರೆ ಗೋವು ವಿಶ್ವಕ್ಕೆ ತಾಯಿ ಎಂದಾರ್ಥ. ಸಮುದ್ರ ಮಂಥನದ ಸಮಯದಲ್ಲಿ ಪ್ರತ್ಯಕ್ಷಗೊಂಡ ಕಾಮಧೇನುವಿನಲ್ಲಿ ಮುಕ್ಕೋಟಿ ದೇವರುಗಳ ಆವಾಸವಿದೆ ಎಂಬುದು ನಮ್ಮ ನಂಬಿಕೆ. ಹಾಗಾಗಿ ಗೋವುಗಳು ಒಂದು ಚಲಿಸುವ ದೇವಾಲಯಗಳು. ಭಾರತದ ಬೆನ್ನಲುಬು ಕೃಷಿ ಇಂದಿಗೂ ಶೇಕಡ 80%ರಷ್ಷು ಕೃಷಿ ಕೆಲಸ ಮತ್ತು ಕೃಷಿ ಉತ್ಪನ್ನಗಳ ಸಾಗಣಿಗೆ ಗೋವಿನ ಮೂಲಕವೇ ನಡೆಯುತ್ತದೆ. ಹಾಗಾಗಿ ಗೋವು ನಮ್ಮ ಆರ್ಥಿಕತೆಯ ಬೆನ್ನಲುಬು ಕೊಡ ಹೌದು.
ಗೋವುಗಳು ಹಾಲು ಮೊಸರು, ಬೆಣ್ಣೆ, ತುಪ್ಪ ಮಾತ್ರವಲ್ಲದೆ ಸೂರ್ಯನ ಕಿರಣಗಳಿಂದ ಸ್ವರ್ಣಕ್ಷಾರವನ್ನು ಹೀರಿ ಹಾಲು ಗೋಮೂತ್ರ, ಗೋಮಯದ ಮೂಲಕ ಜನರಿಗೆ ತಲುಪಿಸುವ ಮಹಾನ್ ಔಷಧಾಲಯ, ಹಾಗಾಗಿ ಭಾರತೀಯ ಸಂಸ್ಕ್ರತಿಯಲ್ಲಿ ಗೋವಿಗೆ ಅತೀ ಪೂಜನೀಯ ಸ್ಥಾನವನ್ನು ನೀಡಿದ್ದೇವೆ. ಆದರೆ ಚಲಿಸುವ ದೇವಾಲಯ, ತೀರ್ಥಾಲಯ, ಔಷಧೀಯವಾದ ಗೋವು ಇಂದು ಕಟುಕನ ಕತ್ತಿಗೆ ಚಿದ್ರ ಚಿದ್ರವಾಗುತ್ತಿದೆ.
ಬಹು ಉಪಯೋಗಿ ದೈವಿಸ್ವರೂಪಿ ಗೋವು ಮತ್ತು ಮಾತೆಯರನ್ನು ಸಂರಕ್ಷಿಸುವ ಹೋಣೆ ನಮ್ಮ ಮೇಲಿದೆ. ಇಂತಹ ಮಹಾನ್ ಕಾರ್ಯವನ್ನು ನಿರಂತರನಾಗಿ ಮಾಡಿಕೊಂಡು ಬರುತ್ತಿದೆ ‘ಗೋವನಿತಾಶ್ರಯ ಟ್ರಸ್ಟ್’.