Affiliated to the Animal Welfare Board of India · 80G tax exemption
Govanithashraya Trust logo Govanithashraya Trust (R.)
ಗೋವನಿತಾಶ್ರಯ ಟ್ರಸ್ಟ್ (ರಿ.), ಮಂಗಳೂರು

Gallery & News

Life at the goushala, our events and our appeals.

Photo gallery

Govanithashraya goushala
Govanithashraya goushala
Govanithashraya goushala
Govanithashraya goushala
Govanithashraya goushala
Govanithashraya goushala
Govanithashraya goushala
Govanithashraya goushala

Events

  • December 2023: Sri Govardhana Pooja, Goupooje and Horekanike
    Held at Kadri Maidan, Mangaluru, on 16–17 December 2023, with a procession of decorated vehicles carrying fodder (horekanike) from Kadri to our goushala at Pajeer.
  • December 2019: Gomandala
    A two-day cattle awareness fair at Nehru Maidan, Mangaluru (7–8 December 2019), with over 100 cows and calves, a Sri Krishna Vesha contest for children, cultural programmes, yoga, bhajans, Godhuli and Go Arati.
  • November 2013: Gopremi Vedike launched
    A forum bringing together everyone who respects and cares for the cow, inaugurated at the Sharada Vidyalaya grounds, Kodialbail.
  • February 2011: Gowsammelan
    A two-day cattle conference held on our premises at Beejaguri.
Sri Govardhana Pooja 2023 invitation, page 1
Sri Govardhana Pooja 2023 invitation, page 2

Appeals & articles

A Call of Gaumatha brochure
A Call of GaumathaBrochure, front
A Call of Gaumatha brochure inside
A Call of GaumathaBrochure, inside
Jeeva Daya appeal
An appeal for Gou SamrakshanaJeeva Daya
ಗೋವಿನ ಹಾಲುಂಡ ನಮ್ಮ ಮೇಲೆ ಗೋಸಂರಕ್ಷಣೆಯ ಹೊಣೆಗಾರಿಕೆ

ಹೆತ್ತ ತಾಯಿಯ ಎದೆಹಾಲಿನ ಮಾನವ ಬದುಕಿನ ಉದ್ದಕ್ಕೂ ಹಾಲುಣಿಸುವ ಗೋಮಾತೆಯೆ ನಮ್ಮ ನಿತ್ಯಸಂಗಾತಿ, ಅನಾದಿ ಕಾಲದಿಂದಲೂ ಮಾನವನು ಗೋವುಗಳೊಡನೆ ಸಹಬಾಳ್ವೆ ನಡೆಸಿದ್ದಾನೆ ಮಾತ್ರವಲ್ಲದೇ ಗೋವಿನಿಂದ ಪಡೆಯುವ ಉತ್ಪನ್ನ, ಉಪಯೋಗಳನ್ನು ಮನಗಂಡು ಗೋವಿಗೆ ಪೂಜ್ಯನೀಯ ಸ್ಥಾನ ನೀಡಿದ್ದಾನೆ. ಆದರೆ ಇಂದು ನಗರೀಕರಣದ ಪರಿಣಾಮವಾಗಿ ಲಕ್ಷ- ಲಕ್ಷ ಗೋವುಗಳು ಕಾಸಾಯಿಕಾನೆಯನ್ನು ಸೇರುತ್ತಿವೆ. ದುರಂತವೆಂದರೆ ಗೋವಿನ ಹಾಲು ಉತ್ಪನ್ನಗಳನ್ನು ಸವಿಯುವ ನಾವು ನಮ್ಮ ತಾಯಿಯಂತಹ ಗೋವಿನ ಸಂರಕ್ಷಣೆ ಮತ್ತು ಸಂವರ್ಧನೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ?

ಗ್ರಾಮವಿಕಾಸ ಮತ್ತು ಗೋಸಂರಕ್ಷಣೆಯ ಬಗ್ಗೆ ಜನ ಮಾನಸದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾನ್ಯ ಸೀತಾರಾಮ ಕೆದಿಲಾಯರು ನಡೆಸುತ್ತಿರುವ ಭಾರತ ಪರಿಕ್ರಮ ಯಾತ್ರೆ ಮಂಗಳೂರಿಗೆ ಬಂದಾಗ ನಾನು ಯಾತ್ರೆಯಲ್ಲಿ ಪಾಲ್ಗೊಡಿದ್ದೆ. ಅವರು ಪ್ರಚುರಪಡಿಸಿದ ಗೋಸಂರಕ್ಷಣೆಯ ವಿಷಯ ಬಾಲ್ಯದಿಂದಲು ಗೋವಿನ ಬಗ್ಗೆ ಆಸಕ್ತಿ ಇದ್ದ ನನಗೆ ಹೊಸ ದೃಷ್ಟಿ ನೀಡಿತು. ಗೋಸಂರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಸಂಕಲ್ಪಮಾಡಿದೆ, ಆದರೆ ಹೇಗೆ?

ಮಂಗಳೂರಿನಂತಹ ನಗರದಲ್ಲಿ ಮನೆಯಲ್ಲಿ ಗೋವುವನ್ನು ಸಾಕುವುದು ಕಷ್ಟಸಾಧ್ಯ ಹಾಗಾಗಿ ಈಗಾಗಲೆ ಇರುವ ಗೋಶಾಲೆಯಲ್ಲಿ ನನ್ನನು ನಾನು ತೊಡಗಿಸಿಕೊಳ್ಳಲು ನಿಶ್ಚಯಿಸಿ ಸ್ನೇಹಿತರಿಂದ ಗೋಶಾಲೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾಗ ನನಗೆ ಹತ್ತಿರವಾಗಿ ಕಂಡಿದ್ದೇ ಮಂಗಳೂರು ಮಹಾನಗರದಿಂದ 22 ಕಿ.ಮೀ. ದೂರದ ಮಂಗಳ ಗಂಗೋತ್ರಿ ಸಮೀಪದ ಪಜೀರು ಎಂಬಲ್ಲಿರುವ “ಗೋವನಿತಾಶ್ರಯ ಟ್ರಸ್ಟ್ (ರಿ.)”

2002ರಲ್ಲಿ “ವಿಶ್ವ ಹಿಂದು ಪರಿಷತ್”ನ ಪ್ರಕಲ್ಪವಾಗಿ ರೂಪುಗೊಂಡ ಈ ಸಂಸ್ಥೆ 10 ಎಕ್ರೆಯ ಸುಂದರ ವಿಶಾಲ ಪ್ರದೇಶದಲ್ಲಿ ಕಪಿಲ, ಆಮೃತ ಹಾಗೂ ಗಂಗಾ ಎಂಬ ಮೂರು ಗೋಶಾಲೆಗಳು ರಚಿಸಲ್ಪಟ್ಟಿವೆ. ಇದರಲ್ಲಿ 250ಕ್ಕೂ ಮಿಕ್ಕಿ ಗೋವುಗಳು ಆಶ್ರಯ ಹೊಂದಿವೆ. ತಮ್ಮ ನೆತ್ತಿಯ ನೇರಕ್ಕೆ ಬೀಸಿದ ಕಟುಕರ ಕತ್ತಿಯಿಂದ ಬದುಕಿ ಬಂದ ಬಡಪಾಯಿ ಮೂಕಪಶುಗಳಿವು. ಯಾರಿಗೂ ಉಪದ್ರವ ಮಾಡದೆ, ಹುಲ್ಲು, ಹಸಿರು ಮೇವು ತಿಂದು ನೀರು ಕುಡಿದು ಅಮೃತ ಸಮಾನ ಹಾಲು ನೀಡುವಂತಹುಗಳು ಗೋವುಗಳು. ಆದರೆ ತನ್ನ ದುರಾಸೆಗೆ ಇವುಗಳ ಪ್ರಾಣವನ್ನೇ ಹಿರುವ ಮಾನವನ ಕ್ರೌರ್ಯತೆಗೆ ಸೇವೆಯ ಸಾತ್ವಿಕತೆ ಒಡ್ದುವ ತೆರದಲ್ಲಿ ಈ “ಗೋವಾನಿತಾಶ್ರಮ ಟ್ರಸ್ಟ್” ತಲೆಯೆತ್ತಿ ನಿಂತಿದೆ. ಅದೇ ರೀತಿ ಇಲ್ಲಿನ ‘ಮಮತ’ ಹೆಸರಿನ ಮಹಿಳಾ ಪುನರ್ವಸತಿ ಕೇಂದ್ರ ಅಶಕ್ತ ಮಹಿಳೆಯರ ಪಾಲಿಗೆ ಭಾಗ್ಯ ಸಂಜೀವಿನಿಯೆನಿಸಿದೆ. ಹತ್ತು ಎಕ್ರೆ ನಿವೇಶನದಲ್ಲಿ ತಲೆಯೆತ್ತಿರುವ ಈ ನಂದಗೋಕುಲದಲ್ಲಿ ಒಂದು ಸುಂದರ ಗೋಪಾಲಕೃಷ್ಣನ ಮಂದಿರವು ನಿರ್ಮಿತಗೊಂಡಿದೆ ಇದರ ಸುತ್ತಲ ಪರಿಸರದಲ್ಲಿ ಹಸಿರು ತೆಂಗಿನತೋಟ ಸಾವಯವ ಕೃಷಿಯು ಇದೆ. ಎರೆಹುಳುಗೊಬ್ಬರ, ಹಟ್ಟಿಗೊಬ್ಬರ, ಗೋಮೂತ್ರ ಸಂಬಂಧಿ ಔಷಧವನ್ನು ಸಂಸ್ಥೆ ಒದಗಿಸುತ್ತಿದೆ. ಕೇಂದ್ರ ಪ್ರಾಣಿ ಅಭಿವೃದ್ಧಿಗೆ ಸಂಯೋಜಿತವಾದ, ಆದಾಯ ತೆರಿಗೆ ವಿನಾಯಿತಿ ಹೊಂದಿದ, ವಿದೇಶದಿಂದಲೂ ದೇಣಿಗೆ ಪಡೆಯಲು ಅಧಿಕೃತ ಸಂಸ್ಥೆ “ಗೋವನಿತಾಶ್ರಯ ಟ್ರಸ್ಟ್ (ರಿ.)”

ಕಳೆದ ಹನ್ನೆರಡು ವರ್ಷಗಳಲ್ಲಿ ದನಕರುಗಳ ಸಂಖ್ಯೆ ದಿನೇ ದಿನೇ ವೃದ್ಧಿಯಾಗುತ್ತಲೇ ಇದೆ. ಪ್ರಾರಂಭದ ದಿನಗಳಲ್ಲಿ 30-40ರ ಸಂಖ್ಯೆಯಲ್ಲಿದ್ದ ಪಶುಗಳ ಸಂಖ್ಯೆ ಇಂದು 250ರ ಗಡಿಯನ್ನು ದಾಟಿ ನಿಂತಿದೆ. ಇಲ್ಲಿರುವ ಗೋವುಗಳಲ್ಲಿ 75% ಹೋರಿಗಳುಹಾಗಾಗಿ ಖರ್ಚು ವೆಚ್ಚಗಳೂ ಈ ಪಶುಸಂಗೋಪನೆ ಬಗೆಗೆ ಅಪಾರವೆನಿಸಿದೆ.

ಸಾಧಾರಣಾ ದಿನವೊಂದಕ್ಕೆ ಸರಾಸರಿ 10,000ರೂಪಾಯಿ ವೆಚ್ಚ ಈ ಸಂಸ್ಥೆಯನ್ನು ನಡೆಸುವಲ್ಲಿ ತಗಲುತ್ತದೆ. ಆದರೆ ದೈನಂದಿನ ಆದಾಯ ಇನ್ನೂ 2,000ರೂ.ಗಳ ಗಡಿ ದಾಟುತ್ತಿಲ್ಲ. ಹಾಗಾಗಿ ಖರ್ಚು ವೆಚ್ಚಗಳ ಲೆಕ್ಕಾಚಾರದಲ್ಲಿ ರೂ. 8,000ದಷ್ಟು ಪ್ರತಿನಿತ್ಯ ನಷ್ಟ ಭರಿಸಿಯೇ ಈ ಸಂಸ್ಥೆ ನಡೆಯುತ್ತಿದೆ. ಆದರೂ ಇದೊಂದು ಗೋಸಂರಕ್ಷಣೆಯ ಪವಿತ್ರ ಕಾರ್ಯ, ಅಶಕ್ತ ಮಹಿಳೆಯರ ಆಶ್ರಯ ತಾಣ ಎನ್ನುವ ಸೇವಾ ಮನೋಭೂಮಿಕೆಯಿಂದ ಲಾಭ-ನಷ್ಟಗಳ ಪರಿವೇ ಇಲ್ಲದೆ ಸಂಸ್ಥೆ ನಡೆಯುತ್ತಿದೆ.

ಒಂದೆಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಗೋವಿನಿಂದ ಪ್ರಯೋಜನ ಪಡೆದವರೆ, ಗೋವಿನ ಹಾಲುಂಡ ನಮ್ಮ ಮೇಲೆ ಗೋಸಂರಕ್ಷಣೆಯ ಹೊಣೆಗಾರಿಕೆ ಇಲ್ಲವೆ? ಮನೆಯಲ್ಲಿ ಗೋವನ್ನು ಸಾಕಲು ಸಾಧ್ಯವಿಲ್ಲದಿದ್ದರೂ ಗೋವನಿತಾಶ್ರಯ ಟ್ರಸ್ಟ್ ನಂತಹ ಗೋಶಾಲೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳಬಹುದು. ನಮ್ಮ ಸಂಪಾದನೆಯ ಒಂದಂಶವನ್ನು ಗೋಮಾತೆಯ ಸೇವೆಗೆ ನೀಡಬಹುದು. ರಜಾದಿನಗಳಲ್ಲಿ ಮನೆಮಂದಿಯನ್ನು ಗೋಶಾಲೆಗೆ ಕರೆತಂದು ಅವರಲ್ಲೂ ಗೋವಿನ ಬಗ್ಗೆ ಭಕ್ತಿ ಮೂಡುವಂತೆ ಮಾಡುವುದು. ಒಟ್ಟಾರೆಯಾಗಿ ಗೋಸಂರಕ್ಷಣೆ ಕೈಜೋಡಿಸುವುದು ಇಂದಿನ ಅತ್ಯಗತ್ಯ ಯಾಕೆಂದರೆ ಗೋವು ಉಳಿದರೆ ಮಾತ್ರ ನಾವು ನೀವೂ ಉಳಿಯಲು ಸಾಧ್ಯ ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗೋವುಗಳನ್ನು ಮೃಗಾಲಯದಲ್ಲಿ ನೋಡುವ ದಿನಗಳು ನಮ್ಮ ಕಣ್ಣಮುಂದಿದೆ. ಎಲ್ಲರ ಬದುಕನ್ನು ಹಸನಾಗಿಸುವುದೇ “ಗೋವನಿತಾಶ್ರಯ ಟ್ರಸ್ಟ್” ನ ಉದ್ದೇಶ. ಅದು ನಾವಿರಬಹುದು, ಗೋವಿರಬಹುದು ಅಥವಾ ಇನ್ನು ಏನೇ ಇರಬಹುದು, ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಅತ್ಯಾಸೆಯಿಂದ ಒಂದು ಮತ್ತೊಂದರ ಅನ್ನ ಕಸಿಯುವ, ಜೀವ ಹಿಂಡುವ ವಿಕೃತಿಗೆ ಆಸ್ಪದ ಕೊಡಬಾರದು ಎಂಬ ಸಂದೇಶವನ್ನು ಹೊತ್ತು ಈ ಸಂಸ್ಥೆ ಮುನ್ನಡೆಯಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಮಂಗಳ ಕಾರ್ಯಕ್ಕೆ ಕೈ ಜೋಡಿಸಿ.

ನ.1 ರಂದು ಗೋಪ್ರೇಮಿ ವೇದಿಕೆ ಶುಭಾರಂಭ

ಮಂಗಳೂರು: ಗೋ ಕಳ್ಳತನದ ಬಗ್ಗೆ ಸಾತ್ವಿಕ ಆಕ್ರೋಶ, ಮಕ್ಕಳಿಗೆ ಗೊತ್ತಿಲ್ಲದ ಗೋವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗೋವಿನ ಬಗೆಗೆ ಗೌರವ ಹಾಗೂ ಅನುಕಂಪ ಇರುವ ಸಹೃದಯರನ್ನೆಲ್ಲಾ ಒಟ್ಟಿಗೆ ಸೇರಿಸುವ ಸಾತ್ವಿಕ ಯತ್ನ ಗೋ ಪ್ರೇಮಿ ವೇದಿಕೆಯಾಗಿದ್ದು, ಇದರ ಶುಭಾರಂಭ ನ.1 ರಂದು ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮಾತೆಯರಿಂದ ಲಲಿತಾ ಸಹಸ್ರನಾಮ ಪಠಣ ನೆರವೇರಲಿರುವುದು ಎಂದು ಗೋವನಿತಾಶ್ರಯ ಟ್ರಸ್ಟಿ ಡಾ.ಪಿ.ಅನಂತಕೃಷ್ಣ ಭಟ್ ಅವರು ಹೇಳಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಗೋಪ್ರೇಮಿ ವೇದಿಕೆ ಗೋ ಸಂರಕ್ಷಣೆ ಹಾಗೂ ಘೋಷಣೆಗೆ ಇಂಬು ನೀಡುವ ಆಂದೋಲನವಾಗಿದೆ. 2001 ರಲ್ಲಿ ಗೋವನಿತಾಶ್ರಯ ಟ್ರಸ್ಟ್ ಸಂಸ್ಥೆಯು ಆರಂಭವಾಗಿದ್ದು, ಪ್ರಸ್ತುತ 300 ಕ್ಕಿಂತಲೂ ಅಧಿಕ ದನ- ಕರುಗಳನ್ನು ಹೊಂದಿದ ಜಿಲ್ಲೆಯ ದೊಡ್ಡ ಗೋ ಶಾಲೆ ಇದಾಗಿದೆ. ಪ್ರತಿ ತಿಂಗಳು ಸುಮಾರು 4 ಲಕ್ಷ ರೂ. ಸಂಸ್ಥೆಯನ್ನು ನಡೆಸಲು ವೆಚ್ಚ ತಗಲುತ್ತಿದೆ. ಇದಕ್ಕಾಗಿ ಸಮಾಜದ ದಾನಿಗಳ ಸಹಕಾರ ಅತ್ಯಗತ್ಯ. ವಾರ್ಷಿಕವಾಗಿ ಕೇವಲ ರೂ. 100 ಗೋಗ್ರಾಸಕ್ಕೆಂದು ನೀಡಿ ಇದರ ಸದಸ್ಯತ್ವ ಹೊಂದಬಹುದು ಅಥವಾ ಐಚ್ಚಿಕವಾಗಿ ಯಾವುದೇ ಹೆಚ್ಚಿನ ಮೊತ್ತ ಉದಾರವಾಗಿ ನೀಡಿ ಗೋ ಸೇವಾ ಚಟುವಟಿಕೆಗೆ ಪ್ರೋತ್ಸಾಹ ನೀಡಬಹುದು.

ರೂ.10,000 ನೀಡಿ ಗೋಶಾಲೆಯ ಒಂದು ದಿನದ ವೆಚ್ಚವನ್ನು ಅಥವಾ ದನವೊಂದರ ವಾರ್ಷಿಕ ವೆಚ್ಚ ಭರಿಸಲು ಮುಂದಾಗಬಹುದು.ಈ ದೇಣಿಗೆ ಗೋವನಿತಾಶ್ರಯದಲ್ಲಿ ಟ್ರಸ್ಟಿಗೆ ಸಂದಾಯಗೊಂಡು ಆದಾಯ ತೆರಿಗೆ ವಿನಾಯಿತಿಯನ್ನು ಹೊಂದಲು ಅವಕಾಶವಿದೆ ಹಾಗೂ ಈ ಸಂಬಂಧ ಕೊಡಿಯಾಲ್ ಬೈಲ್‌ನ ಶಾರದಾ ವಿದ್ಯಾಲಯದ ಸಮೀಪವಿರುವ ಗೋಮಂಡಲದಲ್ಲಿ ಕಾರ್ಯಾಲಯ ಆರಂಭಗೊಂಡಿದೆ ಎಂದು ಅವರು ಹೇಳಿದರು.

ಗೋವನಿತಾಶ್ರಯ ಟ್ರಸ್ಟ್‌ನ ವಿಕ್ರಮ್ ನಾಯಕ್, ಗೋಪ್ರೇಮಿ ವೇದಿಕೆ ಸಂಚಾಲಕರಾದ ರಾಮಕೃಷ್ಣ ಭಟ್, ಕೃಷ್ಣ ಮೂರ್ತಿ, ಸುಧೀರ್ ಆಚಾರ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Help us care for 300 cows

Our Gou Seva needs about ₹6 lakh every month. Every gift is eligible for 80G tax deduction.

Donate now